ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶನಿ' ಧಾರಾವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಫೆವರೇಟ್. ಈ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು ಅದ್ಭುತ. ಶನಿ, ಸೂರ್ಯದೇವ, ಇಂದ್ರ, ಕಾಕರಾಜ, ಮಹಾದೇವ ಹೀಗೆ ಎಲ್ಲರೂ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಹೀಗೆ ತೆರೆಮೇಲೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶನಿ ಈಗ ತೆರೆಹಿಂದೆ ವಿವಾದಕ್ಕೆ ಗುರಿಯಾಗಿದೆ. ಸೂರ್ಯದೇವ ಪಾತ್ರಧಾರಿ ರಂಜಿತ್ ಕುಮಾರ್ ಶನಿ ಧಾರಾವಾಹಿಯಿಂದ ಹೊರಬಂದಿದ್ದಾರೆ.